ಕೆಲವೇ ತಿಂಗಳ ಹಿಂದೆ ಪ್ರಸಿದ್ದ ದಿನ ಪತ್ರಿಕೆಯೊಂದು ಭೈರಪ್ಪನವರ ವಿಚಾರಧಾರೆಯೊಂದಿಗೆ " ಮತಾಂತರ " ಕುರಿತ ಚರ್ಚೆಯನ್ನು ನಡೆಸಿತ್ತು . ಸಾಕಷ್ಟು ಹಿಗ್ಗಾಮುಗ್ಗಾ ಎಳೆದಾಡಿ ತಮ್ಮ ಅದ್ಬುತ ವಿಷಯ ಮಂಡನೆಯಿಂದ ಚುರುಕು ಮುಟ್ಟಿಸಿದ ಎಲ್ಲ ಬರಹಗಾರರೂ ತಮಗೆ ತೋಚಿದಂತೆ ಅಪ್ಪಣೆ ಕೊಡಿಸಿದರು. ಕೆಲವರಂತೂ ಚರ್ಚೆ ಆರಂಭಿಸಿದವರನ್ನು ಟೀಕಿಸಿ ಸಂತ್ರುಪ್ತಿಪಟ್ಟರು!
ಕುತೂಹಲದಿಂದ ದಿನವೂ ಬಿಡದೆ ಓದುತ್ತಿದ್ದ ನನಗೆ ಇತ್ತೀಚೆಗೆ ಕೌತುಕವಾದ ವಿಚಾರವೊಂದು ನನ್ನ ಕಲಾವಿದ ಮಿತ್ರರೊಬ್ಬರಿಂದ ತಿಳಿದು ಬಂತು .
ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಮೊನ್ನೆ ಫೆಬ್ರವರಿ ಎರಡನೇ ತಾರೀಖಿನಂದು ಮಂಗಳೂರಿನ ಬಳಿ ಬಜಪೆಗೆ ಸಮೀಪ ಅದ್ಯಪಾಡಿ ಶ್ರೀ ಆಧಿನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಆಡಿಸಿದರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಒಂದನೇ ಮೇಳದವರು ಆಡಿ ತೋರಿಸಿದರು. ಈ ಸೇವೆ ಆಟ ಆಡಿಸಲು ಕಾರಣ ಪರಿಹಾರವಾಗದೆ ಇದ್ದ ವ್ಯಾಜ್ಯವೊಂದು ಕಟೀಲು ಮಹಾತಾಯಿ ಪರಿಹರಿಸಿ ಕೊಟ್ಟದ್ದೇ ಆಗಿತ್ತು.
ಕ್ರೈಸ್ತ ಬಾಂಧವರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಮೊನ್ನೆ ಫೆಬ್ರವರಿ ಎರಡನೇ ತಾರೀಖಿನಂದು ಮಂಗಳೂರಿನ ಬಳಿ ಬಜಪೆಗೆ ಸಮೀಪ ಅದ್ಯಪಾಡಿ ಶ್ರೀ ಆಧಿನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಆಡಿಸಿದರು. ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಒಂದನೇ ಮೇಳದವರು ಆಡಿ ತೋರಿಸಿದರು. ಈ ಸೇವೆ ಆಟ ಆಡಿಸಲು ಕಾರಣ ಪರಿಹಾರವಾಗದೆ ಇದ್ದ ವ್ಯಾಜ್ಯವೊಂದು ಕಟೀಲು ಮಹಾತಾಯಿ ಪರಿಹರಿಸಿ ಕೊಟ್ಟದ್ದೇ ಆಗಿತ್ತು.
ಮಂಗಳೂರಿನ ಪರಿಸರದಲ್ಲಿ ಆಗಾಗ ಇಂಥ ಸಾಮರಸ್ಯದ ಘಟನೆಗಳು ನಡೆಯುತ್ತಲೇ ಇದ್ದರೂ ಯಾವ ಒಬ್ಬ ಮಾಧ್ಯಮದವರೂ ಇದನ್ನು ತೋರಿಸದೇ ಬರೀ "ಹೊಡಿ ಮಗಾ.. ಹೊಡಿ " ದೃಶ್ಯಗಳನ್ನು ಮಾತ್ರ ವೈಭವೀಕರಿಸಿ ಯಾಕೆ ತೋರಿಸುತ್ತಾರೋ ? ಇನ್ನೂ ಅರ್ಥವಾಗದ ವಿಷಯ !
ನಾಡಿದ್ದು ೧೨ನೆ ತಾರೀಕು ಇದೇ ಆದ್ಯಪಾಡಿಯ ಪರಿಸರದಲ್ಲಿ ಕ್ಲೆಮೆಂಟ್ ಪಿರೆರಾ ಎಂಬ ಭಕ್ತರೊಬ್ಬರು ಕಟೀಲು ಮೇಳದ ಸೇವೆ ಆಟವನ್ನು ಆಡಿಸಲಿದ್ದಾರೆ . ಕುರಿಯ ಗಣಪತಿ ಶಾಸ್ತ್ರಿಯವರ ಸಾರಥ್ಯದಲ್ಲಿ ಈ ಸೇವೆ ಆಟ ನಡೆಯಲಿದೆ.
ಅನೇಕ ಹಿಂದೂ ಭಕ್ತರೂ ಚರ್ಚಗಳಿಗೆ ಹರಕೆ ,ಬೆಳೆ ಕಾಣಿಕೆ ಮತ್ತು ಹಸಿರುವಾಣಿ ಸಲ್ಲಿಸುವುದನ್ನು ನಾನು ಕಣ್ಣಾರೆ ನೋಡಿದ್ದೇನೆ.
ಹಸಿರುವಾಣಿ ಮೆರವಣಿಗೆಯಲ್ಲಿ "ಜೈ" ಕಾರ ಹಾಕುತ್ತ ಭಾಗವಹಿಸಿದ್ದೇನೆ.
ನಮ್ಮಲ್ಲಿ ಸಾಮರಸ್ಯ ಮೂಡಿಸುವುದಕ್ಕಿಂತ "ಒಡಕನ್ನು " ತರುವ ಕೆಲಸಗಳು ಹೆಚ್ಚಾಗುತ್ತಿರುವುದು ವಿಷಾದನೀಯ .
ಏನೇ ಇದ್ದರೂ ಎಲ್ಲೇ ಇದ್ದರೂ ಎಲ್ಲರೂ ಒಟ್ಟಿಗೆ ಈ ಭೂಮಿಯಲ್ಲೇ ಬಾಳಿ ಬದುಕಬೇಕೆಂಬ ಸಣ್ಣ ಸತ್ಯ ಯಾರ ಮನದಲ್ಲೂ ಮೂಡದೆ "ಬಿಸಿ ಬಿಸಿ " ಸುದ್ದಿ ಕೊಡುವುದೇ ನಮ್ಮ ಧ್ಯೇಯ ಎಂದು ವರ್ತಿಸುವುದು ಖಂಡನೀಯ .
ನಿಮಗೇನನಿಸುತ್ತದೆ ?
7 comments:
ಅಣ್ಣಾ ಇದರ ನಿಂಗ ಈಕೆ ಸಂಪದಲ್ಲಿ ಪ್ರಕಟುಸುಲಾಗ
ಪ್ರಿಯರೆ ಇದನ್ನು ಪ್ರಕಟಿಸಬಾರದು ಎನ್ನುವ ಕಾರಣವನ್ನು ಹೇಳುವಿರ? ಅಂಥ ತಪ್ಪುಗಳಿದ್ದರೆ ಲೇಖಕರಿಗೆ ತಿಳಿಸಿ ಹೇಳಬಹುದಲ್ಲವೇ?
ಮಾನ್ಯರೇ, ನಿಮ್ಮ ಲೇಖನ ಓದಿದೆ. ತುಂಬಾ ಹಿಡಿಸಿತು. ಎರಡು ವರ್ಷಗಳ ಹಿಂದೆ ನಾನು ಮಂಗಳೂರಿಗೆ ಪ್ರವಾಸ ಹೋಗಿದ್ದಾಗ ಕಟೀಲು ದುರ್ಗಾಪರಮೇಶ್ವರಿಯ ಕ್ಷೇತ್ರವನ್ನು ನೋಡಿದ್ದೆ. ಆ ಸ್ಥಳ ನನಗೆ ಹಿತವಾಗಿ ತೋರಿತು. ಅಲ್ಲಿದ್ದ ಒಂದು ತೇಗದ ಮರದ ತೇರು ನನ್ನ ಕಣ್ಣಿನಲ್ಲಿ ಇನ್ನೂ ಅಚ್ಚೊತ್ತಿದಂತಿದೆ. ಆ ನೀರಿನ ಸೆಳವು ಕೂಡಾ ಮನಸ್ಸಿನಲ್ಲಿದೆ.
ಪ್ರೀತಿಯಿಂದ
ಸಿ ಮರಿಜೋಸೆಫ್
ರಾಜಾರಾಮಣ್ಣ
ನಿಂಗಳ ಸಲಹೆಗೆ ಧನ್ಯವಾದ . ಆನು ಇದರ "ಸಂಪದ" ಲ್ಲಿ ಪ್ರಕಟಿಸಿದ್ದೆ .ಎನಗೆ ನಿಜವಾಗಿ ಈ "ಸಂಪದ" ಬ್ಲಾಗ್ ಬಗ್ಗೆ ನಿಂಗೊ ಹೇಳಿದ ಮೇಲೆಯೇ ಗೊಂತಾದ್ದು !
thanks a lot
ಸನ್ಮಿತ್ರ ರಾಜ್ ಇವರೇ
ನಾನು ಬರೆದದ್ದು ಸ್ವಲ್ಪ ಮಟ್ಟಿಗೆ ತಪ್ಪಾಗಿತ್ತು. ಅದನ್ನು ನೀವೂ ತಪ್ಪಾಗಿ ಊಹಿಸಿದಿರಿ....!! ನಾನು ಸುಬ್ರಮಣ್ಯ ಇವರಿಗೆ ಲೇಖನವನ್ನು ಸಂಪದದಲ್ಲಿ ಪ್ರಕಟಿಸಿ ಎಂದು ವಿನಂತಿಸಿದ್ದೇನೆ. ವಿನಃ ಪ್ರಕಟಿಸ ಬಾರದು ಎಂದು ಅಲ್ಲ
ಭಟ್ಟರೆ, ನಿಮ್ಮ ಬ್ಲಾಗ್ ಸ್ವಾರಸ್ಯಕರವಾಗಿದೆ. ಎಲ್ಲಿಯೋ ಲಿಂಕ್ ಸಿಕ್ಕಿ ಇಲ್ಲಿಗೆ ಬಂದೆ.
very nice. we people got the gift from british "DIVIDE and RULE".
so people always like to fight each other !
Post a Comment