ಗಾಬರಿಯಾಗಬೇಡಿ ಭಟ್ಟರು ಏನು ಸಡನ್ನಾಗಿ ರಸಿಕರಾಗಿಬಿಟ್ಟರು ಅಂತ ....!!!!
ನಾನು ಇಲ್ಲಿ ಹೇಳಹೊರಟಿರುವುದು ಹೊಸತಾದ ಒಂದು ಕಥಾನಕವನ್ನು . ಆಗಷ್ಟೇ ಬಿಡುಗಡೆಯಾಗಿ ಸೂಪರ್ ಹಿಟ್ ಅನಿಸಿದ ಒಂದು ಸಿನೆಮಾವನ್ನು "ಯಕ್ಷಗಾನ" ವಾಗಿ ಪರಿವರ್ತಿಸಿದ್ದು ಖ್ಯಾತ ಪ್ರಸಂಗಕರ್ತ , ಸೂಪರ್ ಹಿಟ್ ಪ್ರಸಂಗಗಳ ಜನಕ ಈ ಕಥಾನಕವನ್ನೂ ಬರೆದು ಮುಂದಿನ ತಿರುಗಾಟಕ್ಕೆ ಸಿದ್ಧತೆ ಮಾಡಿದ್ದಾರೆ. ಅದರ ಕಥಾ ಹಂದರ ಎಲ್ಲವೂ ಸಿನೆಮಾದಿಂದ ಪ್ರೇರಣೆ ಮಾತ್ರ ! ಅದೇ ಸಿನೆಮಾದ "ಶಿರೋಗೀತೆಯನ್ನು" ವಿಶೇಷ ಆಕರ್ಷಣೆಯಾಗಿ ಖ್ಯಾತ ಭಾಗವತರು ನೃತ್ಯ ಸಂಯೋಜಿಸಿ ಆಡಿಸಲಿದ್ದಾರೆ . ಇದರ ಕಥಾನಾಯಕ ಗಿಟಾರ್ ನುಡಿಸುವುದರಲ್ಲಿ ನಿಸ್ಸೀಮ . ಬೇಟೆಯ ದೃಶ್ಯ , ಬೆಳದಿಂಗಳ ಕುಣಿತ , ಮಳೆಯಲ್ಲಿ ನಾಟ್ಯ , ಕ್ಷಣ ಕ್ಷಣಕ್ಕೂ ನಕ್ಕು ನಗಿಸಲು ನಾಲ್ಕು ಜನ ಹಾಸ್ಯಗಾರರು , ಕುತೂಹಲ ಭರಿತ ಸನ್ನಿವೇಶಗಳು ಖ್ಯಾತ ಕಲಾವಿದರ ಸಮ್ಮಿಲನದೊಂದಿಗೆ ರಂಗಕ್ಕೆ ಬರಲಿದೆ ನಿರೀಕ್ಷಿಸಿ.....

ಅದರಲ್ಲಿ ಬರುವ ಪ್ರಧಾನ ಪಾತ್ರಗಳ ವೇಷದ ಜಲಕ್ ಇಲ್ಲಿದೆ ....
ನಿಮ್ಮ ಅನಿಸಿಕೆಗಳೇನು ?
3 comments:
ಕಂಡದ್ದು ಕೇಳಿದ್ದು ನಿಜವಲ್ಲ ಎಂದು ತೃಪ್ತಿ ಪಡುವ. ಅದು ಹೇಳಿದ್ದು ಯಕ್ಷಗಾನವೂ ಅಲ್ಲ ನೋಡಿದ್ದು ಯಕ್ಷಗಾನವೂ ಅಲ್ಲ.!!!! ವಿಸ್ಮಯ ಪ್ರಕಾರ..!!!
Aadre, Monne Udayavani yaali ide rthiya advertisement nodida nenapu. Yajamaana dinda( Naanu Nodiddu)itteechina "Mumgaaru Male" obba superhit prasanga kartha kaige sikki yakshagana vaguvudu nijakku adbhutha!!!Ithihaasika mattu pauraanika dinda hosa prsanga bareyalu saadhyave illave?
ಇವರೆಲ್ಲ ನಮ್ಮ ಹೆಮ್ಮೆಯ ಗಂಡು ಕಲೆ "ಯಕ್ಷಗಾನ" ದ ಮರ್ಯಾದೆ ತೆಗೆಯುದಕ್ಕೆ ಹುಟ್ಟಿಕೊಂಡವರು ಎಂದು ಹೇಳಿದರೆ ಅದು ತಪ್ಪಾಗಲಾರದು. ಇವರಿಗೆಲ್ಲ ಯಕ್ಷಗಾನದ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಸರಿಯಾಗಿ ಅದನ್ನು ಪ್ರಚಾರ ಪಡಿಸಲಿ. ಅದು ಬಿಟ್ಟು ಅರೆ ಬರೆ ವೇಷ ಹಾಕಿ, ಕೈಯಲ್ಲಿ ಗಿಟಾರ್ ಹಿಡಿದುಕೊಂಡು ದೊಂಬರಾಟದವರ ಹಾಗೆ ಬೀದಿಗಳಲ್ಲಿ ತಿರುಗುವುದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ, ಪ್ರಶಂಸಾರ್ಹವಲ್ಲ.
Post a Comment