ಪಾಯಾತ್ ಕುಮಾರಜನಕ: ಶಶಿಖಂಡಮೌಳಿ:
ಶಂಖಪ್ರಭಶ್ಚ ನಿಧನಶ್ಚ ಗವೀಶಯಾನ:
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
ಆದ್ಯಕ್ಷರ ರಹಿತೋ ಸಹಿತೋಪಿ ದೇವ:
ಶಂಖಪ್ರಭಶ್ಚ ನಿಧನಶ್ಚ ಗವೀಶಯಾನ:
ಗಂಗಾಂಚ ಪನ್ನಗಧರಶ್ಚ ಉಮಾವಿಲಾಸ:
ಆದ್ಯಕ್ಷರ ರಹಿತೋ ಸಹಿತೋಪಿ ದೇವ:
ಇದರಲ್ಲಿ ಮೊದಲ ಅಕ್ಷರ ಸೇರಿಸಿದರೆ ಶಿವನ ಸ್ತುತಿಯಾಗುತ್ತದೆ. ಮೊದಲ ಅಕ್ಷರ ಬಿಟ್ಟರೆ ವಿಷ್ಣುವಿನ ಸ್ತುತಿಯಾಗುತ್ತದೆ. ಮೊದಲ ಅಕ್ಷರವಿದ್ದರೂ ಇಲ್ಲದಿದ್ದರೂ ದೇವರನ್ನೇ ಸ್ತುತಿಸಿದಂತಾಗುತ್ತದೆ.
ಕುಮಾರಜನಕ:= ಕುಮಾರನ ತಂದೆ =ಶಿವ ; ಮಾರ ಜನಕ:= ಮನ್ಮಥನ ತಂದೆ =ವಿಷ್ಣು, ಶಶಿಖಂಡಮೌಳಿ:= ಚಂದ್ರಶೇಖರ , ಶಿಖಂಡಮೌಳಿ:=ನವಿಲುಗರಿಯನ್ನು ಧರಿಸಿದಾತ= ವಿಷ್ಣು/ಕೃಷ್ಣ , ಶಂಖಪ್ರಭ = ಬಿಳಿಬಣ್ಣದವ (ಶಿವ ) , ಖಪ್ರಭ=ಆಕಾಶ ಬಣ್ಣದವ =ವಿಷ್ಣು, ನಿಧನ=ಶಿವ, ಧನ=ವಿಷ್ಣು, ಗವೀಶಯಾನ: = ನಂದಿವಾಹನ , ವೀಶಯಾನ:=ಪಕ್ಷಿವಾಹನ , ಗಂಗಾಂಚ = ಗಂಗಾಧರ , ಗಾಂಚ =ಗೋಪಾಲ ಪನ್ನಗಧರ =ನಾಗಭೂಷಣ,ನಗಧರ = ವಿಷ್ಣು, ಉಮಾವಿಲಾಸ:= ಶಿವ , ಮಾವಿಲಾಸ: =ವಿಷ್ಣು
ಹಾಗಾಗಿ ಮೊದಲ ಅಕ್ಷರ ಸೇರಿಸಿದರೂ ಬಿಟ್ಟರೂ ದೇವರನ್ನು ನೆನೆದಂತೆಯೇ ಆಗುವುದು .
ಹಾಗಾಗಿ ಮೊದಲ ಅಕ್ಷರ ಸೇರಿಸಿದರೂ ಬಿಟ್ಟರೂ ದೇವರನ್ನು ನೆನೆದಂತೆಯೇ ಆಗುವುದು .
ಅರ್ಥಪೂರ್ಣವಾದ ಈ ಶ್ಲೋಕ ಎಷ್ಟು ಸೊಗಸಾಗಿದೆಯಲ್ಲವೇ ?
10 comments:
good one..
ತುಂಬಾ ಚೆನ್ನಾಗಿದೆ.. ಬಹು ಹಿಂದೆ ಕೇಳಿದ್ದೆ...
ಬಹಳ ಚೆನ್ನಾಗಿದೆ.. ಯಾರು ಬರೆದಿದ್ದು/ಎಲ್ಲಿ ಇದೆ ಎಂಬುದರ ಬಗ್ಗೆ ಏನಾದರೂ ಮಾಹಿತಿಯಿದ್ದರೆ ತಿಳಿಸಿ
Very nice meaningful and witty shloka. Appreciate the intelligence of the poet!!.
D.M.SAgar
Nice one. Vidyananda shenoy avara Bharata Darshana dalli kelida nenapu
ಒಳ್ಳೆ ಚಮತ್ಕಾರದ ಶ್ಲೋಕ . ಅಡ್ಡನಾಮಕ್ಕು ಸೈ ಉದ್ದನಾಮಕ್ಕು ಸೈ ! ಚೆನ್ನಾಗಿದೆ . ಇನ್ನು ಇಂಥ ಶ್ಲೋಕವಿದ್ದರೆ ತಿಳಿಸಿ .
ನಾಗರಾಜ ರಾವ್ ,
ಸುಮನಾ , ಪುಣೆ
Actually this shloka i heard in on of the "GAMAKA" program held at tumkur. veda brahma Mattur Keshavamoorty told this shloka on that day. I liked it too much. so published here. thanks for your comments.
интересно, но видео бесплатно на huk.su
ಹರಿ-ಹರರ ಆರಾಧಕರು ಒಂದಾಗಲು ಇದೊಂದು ಆಶಾ ಸಂದೇಶ :)
ಬಹಳ ಚೆನ್ನಾಗಿದೆ... ಸಂಗ್ರಹಿಸಿ ಪ್ರಕಟಿಸದ್ದಕ್ಕೆ ಧನ್ಯವಾದಗಳು
Post a Comment