Thursday, June 17, 2010

ಛಪ್ಪನ್ನೈವತ್ತಾರು ದೇಶಗಳು


ಯಕ್ಷಗಾನದಲ್ಲಿ ಹಲವು ಪ್ರಸಂಗಗಳಲ್ಲಿ ದಿಗ್ವಿಜಯಕ್ಕೆ ಹೊರಟ ರಾಜರು ಸುತ್ತಿ ಗೆದ್ದು ಬರುವ ಯಾ ಹೆಸರಿಸುವ ಛಪ್ಪನ್ನೈವತ್ತಾರು ದೇಶಗಳು ಕೆಳಗಿನಂತಿವೆ


ಅಂಗ

ವಂಗ

ಕಳಿಂಗ

ಕರ್ಣಾಟ

ಕೇರಳ

ಕಾಮರೂಪ

ಗೌಡ

ವನವಾಸ (ಬನವಾಸಿ )

ಕುಂತಲ

ಕೊಂಕಣ

ಮಗಧ

ಸೌರಾಷ್ಟ್ರ

ಮಾಳವ

ಲಾಟ

ಭೋಜ

ವಿರಾಟ

ಶಬರ

ಕಕುರ

ಕುರು

ಅವಂತಿ

ಪಾಂಡ್ಯ

ಮದ್ರ

ಸಿಂಹಲ

ಗುರ್ಜರ

ಪಾರಸಿಕ

ಮಿಥಿಲ

ಪಾಂಚಾಲ

ಕ್ರೂರಸೇನಿ

ಗಾಂಧಾರ

ಬಾಹ್ಲಿಕ

ಹೈಹಯ

ತೌಳವ

ಸಾಲ್ವ

ಪುಂಡ್ರಕ

ಪ್ರಾಗ್ಜೋತಿಷ್ಯ

ಮತ್ಸ್ಯ

ಚೇದಿ

ಬರ್ಬರ

ನೇಪಾಳ

ಗೌಳ

ಕಾಶ್ಮೀರ

ಕನ್ಯಾಕುಬ್ಜ

ವಿದರ್ಭ

ಖುರಸಾಣ

ಮಹಾರಾಷ್ಟ್ರ

ಕೋಸಲ

ಕೇಕಯ

ಅಹಿಚ್ಛತ್ರ

ತ್ರಿಲಿಂಗ

ಪ್ರಯಾಗ

ಕರಹಂಟಕ

ಕಾಂಭೋಜ

ಭೋಟ

ಚೋಳ

ಹೂಣ

ಕಾಶಿ



ಎಲ್ಲ ನೆನಪಿಟ್ಟು ರಂಗಸ್ಥಳದಲ್ಲಿ ಹೇಳಲು ಕಷ್ಟ ಮಾರಾಯರೇ ಅಲ್ವಾ ?

10 comments:

NilGiri said...

"ಛಪ್ಪನ್ನೈವತ್ತಾರು" ಅಂದ್ರೆ ಇಷ್ಟೆಲ್ಲಾ ಅಂತ ಗೊತ್ತಿರಲಿಲ್ಲ! ತುಂಬಾ ಥ್ಯಾಂಕ್ಸು.

Saaranga said...

ತುಂಬಾ ಧನ್ಯವಾದಗಳು ಭಟ್ರೆ. ಬಹಳ ಒಳ್ಳೆಯ ಪಟ್ಟಿ.

ಚೆ೦ಬಾರ್ಪು said...

good info!

but i feel 'chappanaivattaru' is a wrong usage.. beacuase meaning of 'chappan' is 56...

ಸುಬ್ರಹ್ಮಣ್ಯ ಭಟ್ said...

'ಛಪ್ಪನ್ ' ಅಂದರೆ 56. ಅದು ಕೆಲವು ಆಡು ಭಾಷೆಯಲ್ಲಿ ಪದಗಳು ದ್ವಿರುಕ್ತಿ ಬಳಕೆ ಇದೆ . ಉದಾ : ಸೋಪ್ ಸಾಬೂನು ,ಸಂತೆ ಮಾರ್ಕೆಟ್ ಗೆ ಹೋಗಿ ಬರ್ತೇನೆ , ಕೂಡಲ ಸಂಗಮ ಇತ್ಯಾದಿ ..ಇದೂ ಕೂಡ ಹಾಗೆಯೇ !

YAKSHA CHINTANA said...

ಇಷ್ಟೆಲ್ಲ ಕಂಠಪಾಠ ಮಾಡಿ ರಂಗದ ಮೇಲೆ ಒಪ್ಪಿಸಿದರೆ ನಾಲ್ಕು ಒಡ್ಡೊಲಗ ಆಗುವಾಗ ಬೆಳಗಾದಿತಲ್ಲ ಮಾರಾಯರೆ..

ಸುಬ್ರಹ್ಮಣ್ಯ ಭಟ್ said...

ಅದಕ್ಕೆ ಭಾಗವತರು ಪದ್ಯದಲ್ಲಿ ಕುಶ ಲವರ ಕಾಳಗಕ್ಕೆ
ಅಂಗ ವಂಗ ಕಳಿಂಗ ಮಾಳವ ಗೌಳ | ಹಿಂಗದೆಯೇ ಮಾಗಧರ ಗೆಲಿದು ||
ತುಂಗದಲಿ ಮುಂದರಿಯೇ | ಕಂಡರಾ ವನಪುಂಜವನು ಎಡೆ ಬಿಡದೆ ಮತ್ತಾ ||
ಇಷ್ಟೇ ಹೇಳುದು . ಎಲ್ಲರನ್ನು ಗೆದ್ದಾಯಿತು ಮುಂದರಿದು ಬರುವಾಗ ಏನಿದು ? ಗೊಂಡಾರಣ್ಯ ? ಅಂತ....

Anonymous said...

thumba thanx OllE maahiti

Ragu Kattinakere said...

ಇಲ್ಲಿ ಒ೦ದೇ ದೇಶ ಹಲವಾರು ಬಾರಿ ಬೇರೆಬೇರೆ ಹೆಸರಿ೦ದ ಕರೆಯಲ್ಪಟ್ಟಿದೆಯೋ ಎ೦ಬ ಅನುಮಾನ. ಕು೦ತಳ, ಕರ್ನಾಟ,ಬನವಾಸಿ ಇವನ್ನು ಯಾವ್ಯಾವು ಎಲ್ಲೆಲ್ಲಿ ಎನ್ನುವುದೇ ಸಮಸ್ಯೆ. ಹಾಗೆ ಸೀತಾರಮ ಕೆದಿಲ್ಲಾಯರ ಯಕ್ಷಗಾನ ಛ೦ದಸ್ಸಿನ ಪುಸ್ತಕ scan ಎಲ್ಲಿದೆ ಎ೦ದು ತಿಳಿಸಿದರೆ ಅದರ ಕೊ೦ಡಿ ಕೊಟ್ಟರೆ ನಿಮಗೆ ನಾನು ಆಭಾರಿ.

ಕಟ್ಟಿ೦ಕೆರೆ ರಾಗು

Anonymous said...

ಇದು ದ್ವಿರುಕ್ತಿ ಅಲ್ಲ ಜೋಡುನುಡಿ

Anonymous said...

ಕರ್ಣಾಟ ಇದು ಹಳೆ ಮೈಸೂರು ಪ್ರಾಂತ್ಯ
ವನವಾಸಿಕ ಇಂದಿನ ಉತ್ತರಕನ್ನಡ
ಕುಂತಳ ಇದು ಇಂದಿನ ಆದಿಲಾಬಾದ್ (ಆಂಧ್ರ) ಪ್ರಾಂತ್ಯ