ಸರ್ಕಾರವು ಯಕ್ಷಗಾನದಲ್ಲಿ ವಿದ್ವತ್ ಪರೀಕ್ಷೆಯನ್ನು ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹ. ತಡವಾಗಿಯಾದರೂ ಎಚ್ಚೆತ್ತಿರುವ ಅಕಾಡೆಮಿಗಳು ಅವಸಾನದ ಅಂಚಿಗೆ ಸರಿಯುತ್ತಿರುವ ಯಕ್ಷಗಾನದಂಥ ಸಮರ್ಥ ಕಲಾಪ್ರಕಾರಗಳಿಗೆ ಸೂಕ್ತ ಪ್ರೋತ್ಸಾಹ ನೀಡಲು ಉದ್ದೇಶಿಸಿರುವುದು ಯಕ್ಷ ಪ್ರಿಯರಿಗೆ ಸಂತಸ ಉಂಟುಮಾಡಿದೆ . ಇನ್ನು ಸರಿಯಾದ ಪ್ರಸಂಗ ಪ್ರಯೋಗ ಪುಸ್ತಕವನ್ನು ಹಾಗೂ ಅದಕ್ಕೆ ಸಂಬಂಧಿಸಿದ ಆಕರ ಗ್ರಂಥಗಳನ್ನು ಸೇರಿಸಿ ಅನುಭವಿಗಳ ಅಭಿಮತದೊಂದಿಗೆ ಪಾಠ ಪುಸ್ತಕವನ್ನು ಸಿದ್ದಗೊಳಿಸಿ ಆಸಕ್ತರಿಗೆ ಕಲಿಯಲು ವ್ಯವಸ್ಥಿತವಾದ ಅಸ್ತಿವಾರ ಒದಗಿಸಿದಲ್ಲಿ ಈ ಪ್ರಯತ್ನಗಳು ಸಫಲವಾಗಬಹುದು .
ಏನಿದ್ದರೂ ಒಳ್ಳೆಯ ಪ್ರಯತ್ನಕ್ಕೆ ಸರಕಾರವು ಹೊರಟಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ .
2 comments:
ಸಮಗ್ರ ಕಲೆಯನ್ನು ಪೂರ್ಣವಾಗಿ ಗಮನ ಇಟ್ಟು ಯೋಜನೆಯನ್ನು ಕಾರ್ಯರೂಪಕ್ಕೆ ತಂದರೆ ಉತ್ತಮ, ಇದರಲ್ಲೂ ಸ್ವಾರ್ಥ ರಾಜಕೀಯ ವಶೀಲಿ ಬೆರೆಸುವ ಅಪಾಯ ಖಂಡಿತ ಇದ್ದೆ ಇದೆ ... ಅದರೂ ಯಕ್ಷಗಾನದ ಮಟ್ಟಿಗೆ ಇದೊಂದು ಉತ್ತಮ ಬೆಳವಣಿಗೆ.
do not expect anything without politics !
Post a Comment