Friday, May 15, 2009

ಪಠ್ಯ ವಿಷಯವಾಗಿ ಯಕ್ಷಗಾನ ....

ಪಠ್ಯ ಪುಸ್ತಕದಲ್ಲಿ ಯಕ್ಷಗಾನ ಸೇರಿಸಬೇಕು ಎಂಬ ವಾದ ಹಲವು ಸಮಯದಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಉಡುಪಿ ಯಕ್ಷಗಾನ ಕೇಂದ್ರ ಹಾಗೂ ಬಡಗಿನ ಕೆಲವು ಕಡೆ ಪ್ರಾಯೋಗಿಕವಾಗಿ ಯಕ್ಷಗಾನ ಕಲಿಸುವ ಪ್ರಯತ್ನವೂ ನಡೆದಿದೆ ಎಂಬುದು ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದನ್ನು ಗಮನಿಸಿ ಕುತೂಹಲ ಹೆಚ್ಚಾಗಿ ಇನ್ನಷ್ಟು ವಿವರ ತಿಳಿಯಲು ಹಾತೊರೆದಾಗ ತಿಳಿದು ಬಂದದ್ದು ಸುಳ್ಯ ಪರಿಸರದಲ್ಲಿ " ಪಠ್ಯ ವಿಷಯವಾಗಿ ಯಕ್ಷಗಾನ " ಎಂಬ ವಿಚಾರದ ಕುರಿತಾಗಿ ಈಗಾಗಲೇ ಕಮ್ಮಟ , ವಿಚಾರ ವಿಮರ್ಶೆಗಳು ನಡೆದ ಬಗ್ಗೆ ತಿಳಿದು ಬಂತು.


ಸಾಮಾನ್ಯವಾಗಿ ಯಾವುದೇ ವಿಚಾರ ಬಂದಾಗಲೂ "ಬುದ್ದಿ ಜೀವಿಗಳು "ಎನಿಸಿಕೊಂಡವರು ಮೊದಲು ಹೇಳಿ ಬಿಡುವ ವಾಕ್ಯವೆಂದರೆ " ಇದನ್ನು ಪಠ್ಯದಲ್ಲಿ ಸೇರಿಸಬೇಕು " ಎಲ್ಲ ವಿದ್ಯಾರ್ಥಿಗಳೂ ತಿಳಿಯುವಂತಾಗಬೇಕು " ಇತ್ಯಾದಿ ಇತ್ಯಾದಿ ....


ಆದರೆ ಪಠ್ಯ ವಿಷಯವಾಗಿ ಯಕ್ಷಗಾನ ಕಲಿಸಬೇಕೆಂಬುದು ಅತ್ಯಂತ ಸಮಯೋಚಿತ ಯೋಚನೆ . ಯಕ್ಷಗಾನವು ಪೌರಾಣಿಕ ಜ್ಞಾನ , ಭಾಷಾ ಶುದ್ಧತೆ , ಸಂಸ್ಕೃತಿ ಸಂಸ್ಕಾರಗಳನ್ನು ಕೊಡುತ್ತದೆ ಎಂಬುದನ್ನೂ ಪಾಮರರೂ ಅನುಭವದಿಂದ ಒಪ್ಪಿ ಕೊಂಡ ಸತ್ಯ .


ಹಾಗಾದರೆ ಯಕ್ಷಗಾನವನ್ನು ಪಠ್ಯಕ್ಕೆ ಅಳವಡಿಸುವುದು ಹೇಗೆ? ಅದನ್ನು ಬೋಧಿಸುವವರು ಯಾರು? ಬೋಧಿಸುವುದು ಹೇಗೆ ?ಯಕ್ಷಗಾನಕ್ಕೆ ಪಠ್ಯ ಪುಸ್ತಕ ರಚಿಸುವಾಗ ಯಾವ ಯಾವ ಅಂಶಗಳಿಗೆ ಮಹತ್ವ ನೀಡಬೇಕು ? ಎಂಬುದೂ ಅತ್ಯಂತ ಮಹತ್ವದ ವಿಚಾರ . ಯಕ್ಷಗಾನದ ನಾಟ್ಯ , ಅಭಿನಯ , ವಾಚಿಕಾಭಿನಯ , ಅರ್ಥಗಾರಿಕೆ , ಮುಖವರ್ಣಿಕೆ ಹಾಗೂ ಪ್ರಸಂಗ ಸಾಹಿತ್ಯಗಳ ಸಮಗ್ರ ವಿಚಾರಗಳನ್ನೊಳಗೊಂಡ ಸಮತೂಕದ ಒಂದು ಪಠ್ಯವನ್ನು ಸಿದ್ದ ಪಡಿಸಬೇಕಾದ ಅಗತ್ಯವಿದೆ .


ಪೂರ್ವರಂಗದೊಂದಿಗೆ ಆರಂಭವಾಗುವ ಪಠ್ಯ ಕ್ರಮ ಪ್ರಸಂಗದ ಪದ್ಯಗಳಿಗೆ ಕ್ರಮವತ್ತಾದ ಕುಣಿತ , ಸಮರ್ಪಕವಾದ ಅರ್ಥ , ಅಭಿನಯವನ್ನು , ಸೂಕ್ತ ಮುಖವರ್ಣಿಕೆಯೊಂದಿಗೆ ಕಲಿಸಿದಲ್ಲಿ ಮುಂದಿನ ಪೀಳಿಗೆಗೆ ಯಕ್ಷಗಾನದ ಸಹಜ ಸೌಂದರ್ಯ ಉಳಿಯುತ್ತದೆ . ಈ ನಿಟ್ಟಿನಲ್ಲಿ ಪ್ರಕೃತ ಯಕ್ಷಗಾನದ ಪ್ರಸಿದ್ಧರಾದವರೆಲ್ಲರೂ ತಮ್ಮ ಅನುಭವದ ದೇಣಿಗೆಯನ್ನು ನೀಡಿ ಅವೆಲ್ಲವನ್ನೂ ಒಟ್ಟು ಸೇರಿಸಿ ಪರಿಷ್ಕರಿಸಿ ಗ್ರಂಥರೂಪವನ್ನು ಕೊಡಬೇಕಾದ ಅನಿವಾರ್ಯತೆ ಇದೆ .


ಯಕ್ಷಗಾನಕ್ಕೆ ತನ್ನದೇ ಆದ ನಿರ್ದಿಷ್ಟ ಶಾಸನಗಳಿಲ್ಲದೆ ಹಿರಿಯ ಕಲಾವಿದರು ಮಾಡಿದ್ದನ್ನೇ ಅನುಕರಿಸಿ ಇತ್ತೀಚೆಗಂತೂ ಹಲವು ಕ್ರಮಗಳು ನಶಿಸಿಹೋಗಿ , ಪ್ರದರ್ಶನವೆಂದರೆ ಗಿರಕಿ ಹೊಡೆಯುವುದೆಂಬ ಮಟ್ಟಕ್ಕೆ ಬಂದದ್ದು ಮಾತ್ರ ವಿಷಾದನೀಯ .ಇನ್ನಾದರೂ ಸರಿಯಾದ ಪಠ್ಯಕ್ರಮವನ್ನು ಒಮ್ಮತದಿಂದ ಮಾಡಿ ತರಗತಿಯ ಸ್ತರಕ್ಕೆ ತಕ್ಕಂತೆ ಬಾಲ ಪಾಠದಿಂದ ತೊಡಗಿ ಎಲ್ಲ ಕ್ರಮಗಳನ್ನು ಪರಿಪೂರ್ಣ ಪಠ್ಯಕ್ಕೆ ಅಳವಡಿಸಿದಲ್ಲಿ ಶಿಸ್ತುಬದ್ಧವಾದ ಕಲೆಯನ್ನಾಗಿ ಯಕ್ಷಗಾನವನ್ನು ರೂಪಿಸಬಹುದು.


ನಿಮಗೇನನಿಸುತ್ತದೆ ........?

5 comments:

ಚೆ೦ಬಾರ್ಪು said...

yochaneyeno olleyade.. aadare patyavannu nirdharisuvavaru yaru? kalisalu samartha gurugalu siguvare? ee bagge namma yakshagana 'ballavaru' endoo ommatakke bararlaararu.. konege vidyarthigalu eno ondu kai-kaalu aadisuvudanbnne yakshaganada hesaralli kaliyuva sambhavave hechchu

Vasudeva said...

patya vishayavaagi yakshagana - yochane olleyadu. yojaneyagi kaaryaroopakke bandare innoo olleyadu. kalavidaru, kala vimarshakaru, kalarasikaru ottu seri patya rachisabeku. poorvaagrahada kaatavirabaaradu. thaanu kunidadde naatya, aadidde mathu emba daarshtyavillade haththu seri muththu kattuva prayathna aagabeku. mukhyavaagi yakshaganadalli vidvath padavi padedava, rangadalloo mereyuva haagaagabeku.

Karthik said...

ಪಠ್ಯಕ್ಕಿಂತಲೂ ವಾರಕ್ಕೊಮ್ಮೆ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುವ ವ್ಯವಸ್ಥೆ ಇದ್ದರೆ ಅದು ಇನ್ನೂ ಅರ್ಥಪೂರ್ಣವಾಗಬಹುದು. ಯಾಕೆಂದರೆ, ಯಕ್ಷಗಾನದಲ್ಲಿ ಹೆಚ್ಚಿನ ಅಂಶಗಳು ನೋಡಿ ಕಲಿಯಲು ಬಹಳ ಇದೆ; ಮತ್ತೂ ಅಭ್ಯಾಸಿಸಿ ಕಲಿಯುವುದು, ಕರಗತ ಮಾಡಲು ಇನ್ನಶ್ಟು ಇದೆ.
ಈಜು ಕಲಿಯಲು ನೀರಿಗಿಳಿಯಲೇ ಬೇಕಲ್ಲವೆ?
ಸರಯಾಗಿ ವೇತನ ಕೊಟ್ಟರೆ ಕಲಿಸುವ ಗುರುಗಳು ಸಿಗಲು ತುಂಬಾ ಕಷ್ಟವಾಗಲಾರದು; ಮೇಳ ಬಿಟ್ಟು ಜೀವನೋಪಯಕ್ಕಾಗಿ ಬೇರೆ ಉದ್ಯೋಗವನ್ನು ಆಶ್ರಯಿಸಿದವರು ಹಲವರಿದ್ದಾರೆ. ಅಂತಹ ಆಸಕ್ತಿ ಉಳ್ಳವರಿಗೆ ಇದೊಂದು ಸದಾವಕಾಶವೂ ಹೌದು.

YAKSHA CHINTANA said...

ಯಕ್ಷಗಾನ ಪಠ್ಯ ವಿಷಯವಾದರೆ ಒಂದು ಮಾನ್ಯತೆ ದೊರೆತಂತೆ. ಮೊದಲಾಗಿ ಯಕ್ಷಗಾನ ಅಂದರೆ ಇದು ಎಂದು ಹೇಳುವಂತೆ ಪರಿಪೂರ್ಣ ಯಕ್ಷಗಾನದ ಪರಿಚಯವಾಗಬೇಕು. ಯಕ್ಷಗಾನದ ಅರಿವಿಲ್ಲದವರು ಕೆಲವು ಆಭಾಸಕರ ಪ್ರದರ್ಶನ ಕಂಡು ಇದುವೇ ಯಕ್ಷಗಾನ ಎಂದು ತಿಳಿವಂತೆ ಆಗಬಾರದು. ಮತ್ತು ಅದರಲ್ಲಿ ಅಭಿಮಾನಕ್ಕಿಂತ ಹೆಚ್ಚಾಗಿ ಗೌರವ ಮೂಡಬೇಕು. ಯಕ್ಷಗಾನದ ಶಿಸ್ತು , ಮತ್ತು ಸಂಪ್ರದಾಯ ಅಂದರೆ ಏನು ಎಂದು ತಿಳುವಳಿಕೆ ಕೊಟ್ಟ ಬಳಿಕ ಸಂಪ್ರದಾಯ ಹೇಗಿರುತ್ತದೆ ಎಂಬ ವಿಚಾರದಲ್ಲಿ ಹಿರಿಯ ಕಲಾವಿದರ ಒಮ್ಮತದ ಸಲಹೆ ತೆಗೆದು ಕೊಂಡು ಎಲ್ಲವನ್ನು ಅಳವಡಿಸಿ ಒಂದು ಪಠ್ಯಕ್ರಮ ತಂದರೆ ಒಳ್ಳೆಯದು. ಕೇರಳದಲ್ಲಿ ಕಥಕ್ಕಳಿಗೆ ಇದ್ದಂತೆ ಸರಕಾರದ ಮಾನ್ಯತೆಯ ಜತೆಗೆ ಅದರಲ್ಲೇ ಒಂದು ಸ್ನಾತಕ ಪದವಿಯನ್ನು ಬಳಕೆಗೆ ತಂದು ಒಂದು ಕಲಾಮಂಡಲವನ್ನು ರೂಪಿಸಿದರೆ ಒಳ್ಳೆಯದು.

Ragu Kattinakere said...

Yakshagana patya krama rachanege modalu aagabekaada kelsa ondide. Adendare Yakshaganada bagge eegiruva patya galalli ondo paata serpade yaaguvudu. Kannada sahitya oduvavrige Yakshagana sahityada arivu moodisuvudu. Aamele Yakshaganavannu kalisuva patyada bagge Aalochisabahudu. Adakke kammatada avashyakate illa. Aadare patya samitige beedike sallisuva agatya ide!