ಮಂಗಳೂರು ಆಕಾಶವಾಣಿಯಲ್ಲಿ ಕೃಷಿರಂಗ ಕಾರ್ಯಕ್ರಮದಲ್ಲಿ ಶ್ರೀ ದಾಮೋದರ ಮಂಡೆಚ್ಚರು ಹಾಡಿದ ಗಣಪತಿ ಕೌತುಕ ಸಣ್ಣವನಿದ್ದಾಗ ಕೇಳಿದ್ದೆ . ನಂತರ ತೆಂಕುತಿಟ್ಟು ಹಿತರಕ್ಷಣಾ ವೇದಿಕೆ ,ಸುಳ್ಯದವರು ಬಿಡುಗಡೆ ಮಾಡಿದ 'ಯಕ್ಷಗಾನ ಪೂರ್ವರಂಗ' ಧ್ವನಿ ಸುರುಳಿಯಲ್ಲಿ ಬಲಿಪ ಭಾಗವತರ ಗಣಪತಿ ಕೌತುಕ ಅದ್ಭುತವಾಗಿ ಮೂಡಿ ಬಂದಿದೆ . ಗಣಪತಿ ಕೌತುಕ ಪೂರ್ಣ ಪಾಠ ಬಾಯಿಪಾಠ ಬಂದರೆ ಮಾತ್ರ ಅದಕ್ಕೆ ಮದ್ದಲೆ ಸಾಥ್ ನೀಡುವುದಕ್ಕೆ ಸಾಧ್ಯ . ಹಾಗಾಗಿ ಪೂರ್ವರಂಗದಲ್ಲಿ ಅದನ್ನು ಹೇಳಬೇಕೆಂದರೆ ಭಾಗವತರಿಗೆ ಹಾಗೂ ಮದ್ದಲೆಗಾರನಿಗೆ ಅದು ಗೊತ್ತಿರಲೇ ಬೇಕು !
ಮತ್ತೆ ಮತ್ತೆ ನನ್ನನ್ನು ಕಾಡುತ್ತಿರುವ ಗಣಪತಿ ಕೌತುಕದ ಆರಂಭ ಹೀಗಿದೆ
" ಕಿಡ್ತಕ ಥೈ ಧಿಧ್ಧಿ ಥೈ ತಾಂ ಕಿಡ್ತಕ ತತ್ತರಿ ತತ್ತಾಂ , ತತ್ತೊಂ ಕಿಡ್ತಕ ತರಿಕಿಟ ಕಿಟತಕ ಅರುದಿನ ಮರುಮಗ ವಿಘ್ನ ವಿನಾಶಕ ......."
ಇತ್ತೀಚಿಗೆ ಮರೆಗೆ ಸಂದಿರುವ ಪೂರ್ವ ರಂಗದ ಒಂದು ವಿಶಿಷ್ಟ ಹಾಡು ಮುಂದಿನ ಪೀಳಿಗೆಗೆ " ಕೌತುಕ "ವಾಗಿಯೇ ಉಳಿಯಲಿದೆಯೇನೋ ?
4 comments:
poorva ranga sadharana sampoornavagi rangada mele nanu nodiddene....balyadalli but heege ondu hesaru irodu nanu ivatte keluvudu.
"Poorva Ranga andre "Ganapathi stuthi" maatravo? illa Kodangi,stree ityaadi yo? Pl. tilisi
ಪೂರ್ವ ರಂಗ ಅಂದರೆ ಮೇಳದವರು ಆತ ಆಡಿಸುವವರ ಮನೆಗೆ ಬಂದು ತಾಳಮದ್ದಲೆ ಹಾಕವುದರಿಂದ ತೊಡಗಿ ಚೌಕಿ ಪೂಜೆ , ಚೌಕಿಯಿ೦ದ ರಂಗಸ್ಥಳಕ್ಕೆ ಬರುವಿಕೆ , ರಂಗ ಪೀಠಿಕೆ ಬಾರಿಸುವುದು , ಕೋಡಂಗಿ ಕುಣಿತ , ಬಾಲ ಗೋಪಾಲ , ಷಣ್ಮುಖ ಸುಬ್ರಾಯ , ಗಣಪತಿ ಕೌತುಕ , ಮುಖ್ಯ ಸ್ತ್ರೀ ವೇಷ , ಅರ್ಧನಾರಿ , ಪೀಠಿಕಾ ಸ್ತ್ರೀ ವೇಷ ಇತ್ಯಾದಿ ಆ ದಿನದ ಪ್ರಸಂಗದ ಕಥೆ ಆರಂಭಕ್ಕಿಂತ ಮೊದಲಿನ ಕ್ರಮಗಳು ಒಟ್ಟಾಗಿ ಪೂರ್ವರಂಗವೆನ್ನುತ್ತಾರೆ .
Subanna,Dhanya vaadagalu
Post a Comment