Tuesday, May 13, 2008

ಮದ್ದಲೆ ಮಾಂತ್ರಿಕನಿಗೆ ನುಡಿ- ನಮನ ...


ಶಿರಂಕಲ್ಲು ನಾರಾಯಣ ಭಟ್ ನಿಧನ ಎಂಬ ವರ್ತಮಾನ ಯಕ್ಷಗಾನ ಅಭಿಮಾನಿಗಳಿಗೆ ಅತ್ಯಂತ ದು:ಖದ ವಿಚಾರ . ತಾನಾಯಿತು ತನ್ನ ಕೆಲಸವಾಯಿತು ಎಂಬಷ್ಟು ತೀರಾ ಮೃದು ಸ್ವಭಾವದ ನಾರಾಯಣಣ್ಣ ಹಳೆ ತಲೆಮಾರಿನ ಮದ್ದಲೆಗಾರರು . ತೆಂಕು ತಿಟ್ಟಿನ ಹಿರಿಯ ಮಹಾನ್ ಕಲಾವಿದರನ್ನೆಲ್ಲ ಕುಣಿಸಿದ ಇವರು ಅಗರಿ ಭಾಗವತರಿಂದ ಹಿಡಿದು ನಿನ್ನೆ ಮೊನ್ನೆ ಭಾಗವತರಾದವವರ ವರೆಗೆ ಎಲ್ಲರಿಗೂ ಮದ್ದಲೆ ಸಾಥ್ ನೀಡಿದವರು .
ಸುರತ್ಕಲ್ ಮೇಳದಲ್ಲಿ "ಬಪ್ಪನಾಡು ಕ್ಷೇತ್ರ ಮಹಾತ್ಮೆ " ಅಗರಿ ಶ್ರೀನಿವಾಸ ಭಾಗವತರ ಭಾಗವತಿಕೆಯಲ್ಲಿ ಶೇಣಿ -ಜೋಶಿ ಜೋಡಿಯನ್ನು ಕುಣಿಸಿದ
ಇವರು ಹಲವು ದೊಡ್ಡ ಕಲಾವಿದರ ಒಡನಾಟದಿಂದ ಅನುಭವಸಂಪನ್ನರಾಗಿದ್ದರು .
ಇಡೀ ರಾತ್ರೆ ದಣಿವರಿಯದೆ "ತುಳಸಿ ಜಲಂಧರ" ಪ್ರಸಂಗಕ್ಕೆ ಮದ್ದಲೆ ಸಾಥ್ ನೀಡಿದ್ದನ್ನು ೬ ನೆ ತರಗತಿಯಲ್ಲಿರುವಾಗಲೇ ನೋಡಿ ಆನ೦ದಿಸಿದ್ದೇನೆ. ಇವರ ನಿಧನದಿ೦ದ ಯಕ್ಷಗಾನ ಅಭಿಮಾನಿಗಳುಹಳೆಯ ಕೊಂಡಿಯೊಂದನ್ನು ಕಳೆದುಕೊಂಡು ಬಹು ದೊಡ್ಡ ನಷ್ಟವನ್ನು ಅನುಭವಿಸುವಂತಾಯಿತು. ದೇವರು ಅವರಿಗೆ ಸದ್ಗತಿಯನ್ನು ನೀಡಲಿ ಎಂದು ಹೃನ್ಮನಪೂರ್ವಕ ಹಾರೈಸುತ್ತಿದ್ದೇವೆ .

1 comment:

Lanabhat said...

ಸುಬ್ರಹ್ಮಣ್ಯ ಣ್ಣ ಈ ಲಿಂಕು ಸರಿ ಇಲ್ಲೆ ಕಾಣ್ತು ಬೇರೆ ಹೊಡೇಂಗೆ ಹೋತು ಕ್ಲಿಕ್ ಮಾಡಿಯಪ್ಪಗ...

ನಿಂಗೊ ಹವ್ಯಕಲ್ಲೂ ಬರದರೆ ಲಾಯ್ಕ ಅಕ್ಕು ಓದ್ಲೆ..

ಬ್ಲಾಗು ಆನು ಇತ್ತೀಚಗೆ ನೋಡಿದ್ದು.. ಸುಮಾರು ಬರದ್ದಿ ಲಾಯ್ಕ ಬರೆತ್ತಿ ನಿಂಗ...