Monday, May 12, 2008

159- ಪುಲಕೇಶಿ ನಗರ (ಪ. ಜಾ.), ಮತಗಟ್ಟೆ ಸ೦ಖ್ಯೆ - 39A


ಈ ಸಲ ಚುನಾವಣಾ ಕಾರ್ಯಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ತೆರಳಬೇಕೆಂದು ಮುಖ್ಯ ಚುನಾವಣಾಧಿಕಾರಿಯವರ ಆದೇಶ ಬಂದಾಗ ನಿಜಕ್ಕೂ ಸಮಾಧಾನದ ಉಸಿರು ಬಿಟ್ಟಿದ್ದೆ. ಯಾಕೆಂದರೆ ಕೊನೆ ಪಕ್ಷ ಮಹಾನಗರಕ್ಕೆ ಹೋಗುವುದು ; ಅಲ್ಲಿನ ಶಾಲೆಗಳು ತಕ್ಕ ಮಟ್ಟಿಗೆ ಉತ್ತಮವಾಗಿರುತ್ತದೆ ಎಂಬ ಕಲ್ಪನೆ (!) ಮನದಲ್ಲಿತ್ತು. ನಾಗರಿಕ ಜನ ಮೇಲಾಗಿ ವಿದ್ಯಾವಂತರು ಇರುವುದರಿಂದ ನಮ್ಮ ಕರ್ತವ್ಯ ಪಾಲನೆ ಮಾಡಲು ಅನುಕೂಲವಾಗುತ್ತದೆ ಎಂದು ಯೋಚಿಸುತ್ತಾ ಮಹಾನಗರ ಪಾಲಿಕೆ ಸರಕಾರೀ ಪದವಿ ಪೂರ್ವ ಕಾಲೇಜು , ಪುಲಕೇಶಿ ನಗರ , ಪ್ರೇಝರ ಟೌನ್ ಸೇರಿದೆ .ನನ್ನಂತೆ ಹಲವು ಮಂದಿ "ಮತಿಗೆಟ್ಟ ಅಧಿಕಾರಿಗಳು " ಅಲ್ಲಲ್ಲ ... ಮತಗಟ್ಟೆ ಅಧಿಕಾರಿಗಳು !! ಅಲ್ಲಿ ಸೇರಿದ್ದರು .
ಈ ಸಲ ನನಗೆ ದೊರೆತದ್ದು ಪುಲಕೇಶಿ ನಗರ ಮೀಸಲು ಕ್ಷೇತ್ರ .ನಾನು ತೆರಳಿದವನೇ ನನ್ನ ಗುಂಪಿನ ಸದಸ್ಯರೆಲ್ಲರೂ ಒಂದೆಡೆ ಸೇರಿರುವಲ್ಲಿ ಹೋಗಿ ಅವರೊಂದಿಗೆ ಚುನಾವಣೆಗೆ ಬೇಕಾದ ಮತಯಂತ್ರ , ಇತರ ಪರಿಕರಗಳನ್ನು ಪಡೆಯಲು ಸಾಲಿನಲ್ಲಿ ನಿಂತೆ .
"159- ಪುಲಕೇಶಿ ನಗರ (ಪ. ಜಾ.), ಮತಗಟ್ಟೆ ಸ೦ಖ್ಯೆ - 39A" ಸುಬ್ರಹ್ಮಣ್ಯ ಭಟ್ ಎಂದು ಜೋರಾಗಿ ಮೈಕನಲ್ಲಿ ಘೋಷಿಸಿದಾಗ ಪರಿಕರಗಳನ್ನು ಪಡೆಯಲು ಧಾವಿಸಿದೆ . ಮತಯನ್ತ್ರದ ವಿಳಾಸ ಮುದ್ರಿಕೆಯನ್ನು ನೋಡಿ ನನಗೆ ವಹಿಸಲಾದ ಮತಗಟ್ಟೆ ಯಾವುದಿರಬಹುದು ? ಎಂಬ ಸಹಜ ಕುತೂಹಲದಿಂದ ನೋಡಿದಾಗ " ಅಮರ್ ಸ್ಕೂಲ್ ", ಅಯೋಧ್ಯಾದಾಸ್ ನಗರ್ , ಮಾಲಿಕ ಸಾಬ್ ರೋಡ್ " ಎಂದು ನಮೂದಗಿದ್ದು ನನಗೆ ಸ್ವಲ್ಪ ಸಮಾಧಾನವಾಯಿತು . ಯಾವುದೊ ಕ್ರಿಸ್ಚನ್ನರ ಶಾಲೆ ಇರಬೇಕು . ಅದು ಅಯೋಧ್ಯಾದಾಸ ನಗರದಲ್ಲಿದೆ . ಒಳ್ಳೆ ಏರಿಯಾವೇ ಇರಬಹುದೆಂದು ತರ್ಕಿಸಿಕೊಂಡು ನನ್ನ ಗುಂಪಿನವರೊಂದಿಗೆ ಮಿನಿ ಬಸ್ ಏರಿ ಕುಳಿತೆ .
ಬಸ್ ಮತಗಟ್ಟೆ ಇರುವ ಪ್ರದೇಶವನ್ನು ತಲುಪಿದಾಗಲೇ ನನಗೆ ತಿಳಿದದ್ದು ನಾನು ಬಂದದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ಸೇರಿದ " ಅನಾಗರಿಕ ಸ್ಥಳಕ್ಕೆ " ನಾನು ತಲುಪಿದೆ ಎಂದು !!
"ಅಮ್ಮಾರ್ ಸ್ಕೂಲ್ " ಎಂಬುದು ಬರವಣಿಗೆ ದೋಷದಿಂದ "ಅಮರ್ ಸ್ಕೂಲ್ " ಎಂದು ವಿಳಾಸ ಪತ್ರದಲ್ಲಿ ನಮೂದಾಗಿತ್ತು !!
ಆ ಪ್ರದೇಶ ಈ ರೀತಿ ಇರಬಹುದೆಂಬ ಕಲ್ಪನೆ ನನಗೆ ಕನಸಿನಲ್ಲಿಯೂ ಇರಲಿಲ್ಲ !! ಎಲ್ಲಿ ನೋಡಿದರಲ್ಲಿ ಮಟನ್ ಅಂಗಡಿಗಳು , ಮುಸ್ಲಿಮರ ಮನೆಗಳನ್ನು ಬಿಟ್ಟು ಒಂದೇ ಒಂದು ಮನೆ ಕಣ್ಣಿಗೂ ಕಾಣಿಸುತ್ತಿರಲಿಲ್ಲ ! ತೆರೆದ ಚರಂಡಿ ತುಂಬಾ ರಕ್ತ , ಹಂದಿಗಳ ಕೇಕೆ
ಭಯಂಕರ ವಾಸನೆ . ರಾಜಧಾನಿಯಾದ ಬೆಂಗಳೂರಿನಲ್ಲಿ ಅದೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ಒಳಪಟ್ಟ ಜಾಗದಲ್ಲಿ ನಾನು ನಿಂತಿದ್ದೆನೆಯೇ ? ಎಂದು ಸಂದೇಹ ಹುಟ್ಟಿಸುವ ಅಲ್ಲಿ ಇರುವ ಜನರ ಜೀವನ ಶೈಲಿ ನೋಡಿದಾಗ ಇವರೂ ನಾಗರಿಕರೆ ?? ಪ್ರಶ್ನಿಸುವಂತಿತ್ತು .
ಒಬ್ಬ ಸಾತ್ವಿಕ ಮನುಷ್ಯ ಒಂದು ಕ್ಷಣಕ್ಕೂ ನಿಲ್ಲಲು ಸಾಧ್ಯವಾಗದ ಆ ಸ್ಥಳದಲ್ಲಿ ಒಂದು ಇಡೀ ದಿನ ಚುನಾವಣಾ ಕಾರ್ಯ ಹೇಗೆ ಯಶಸ್ವಿಯಾಗಿ ಪೂರೈಸಿ ಜೀವಂತ ಮರಳಿ ನನ್ನ ಸ್ವಸ್ಥಾನ ಸೇರಿದೆ ಎಂಬುದು ಇನ್ನು ಸೋಜಿಗದ ಸಂಗತಿಯೇ !!
ಅಲ್ಪ ಸಂಖ್ಯಾತರೆಂದು ಹೇಳಿಕೊಂಡು ಶಾಲೆಗೆ ಪರವಾನಿಗೆ ಗಿಟ್ಟಿಸಿಕೊಂಡು ಕೋಳಿ ಗೂಡಿನಂಥ (ನಮ್ಮ ಊರ ಕಡೆ ಅಡಿಕೆ ಒಣಗಿಸುವ ಗೊದಾಮಿನಂತಿರುವ ) ಕಟ್ಟಡದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಎಂದು ರಾಜಧಾನಿಯಲ್ಲೇ ರಾಜಾರೋಷವಾಗಿ ಇವರು ನಡೆಸುತ್ತಿರುವ ಉದ್ಯಮ ನೋಡಿದರೆ ಯಾರೇ ಆದರೂ ಬೆಚ್ಚಿ ಬೀಳುವನ್ತಿದ್ದ ಆ ಕಟ್ಟಡದಲ್ಲಿ ಬಹಳ ಸಂಕಟಪಟ್ಟುಕೊ೦ಡು ಮತಗಟ್ಟೆ ಸ್ಥಾಪಿಸಿಕೊಂಡು ಕುಳಿತೆವು . ರಾತ್ರೆ ಊಟವಿಲ್ಲ ; ಕುಡಿಯಲು ಒಳ್ಳೆ ನೀರಿಲ್ಲ . ಜೊತೆಯಲ್ಲಿ ತಂದಿದ್ದ ನೀರೆಲ್ಲ ಖಾಲಿಯಾಗಿ ಹೋಗಿತ್ತು . ಮನ ಮುದುಡಿ ಹೋಗಿದ್ದರೂ ಕರ್ತವ್ಯ ಪಾಲಿಸದೇ ವಿಧಿ ಇಲ್ಲ .
ಮರುದಿನ ಬೆಳಗ್ಗೆ ೬ ಗಂಟೆಗೆ ಸರಿಯಾಗಿ ಅಣಕು ಮತದಾನ ಮಾಡಿ ತೋರಿಸಿ ೭ಕ್ಕೆ ಸರಿಯಾಗಿ ಮತದಾನಕ್ಕೆ ಅನುವು ಮಾಡಿ ಕೊಟ್ಟೆವು . 1042 ಮತದಾರರಿದ್ದ ಅಲ್ಲಿ ಶೇ. ೯೦ ಮುಸ್ಲಿಂ ಮತದಾರರೂ ; ಅಲ್ಪಸಂಖ್ಯಾತ ಹಿಂದೂ ಮತದಾರರೂ ಮತದಾನ ಮಾಡಿದ್ದರು. ೧೧.೪೦ ರ ಸುಮಾರಿಗೆ ಯುವಕರ ಗುಂಪೊಂದು ಗಲಭೆ ಎಬ್ಬಿಸುವ ಪ್ರಯತ್ನ ಮಾಡಿದಾಗ ತಕ್ಷಣ ಪೊಲೀಸರಿಗೆ ಸುದ್ದಿ ತಲುಪಿಸಿದಾಗ ೧೦ ನಿಮಿಶದೊಳಗಾಗಿ BSF ತಂಡ ಸ್ಥಳಕ್ಕೆ ಬಂದು ಲಘು ಲಾಠಿ ಪ್ರಹಾರ ನಡೆಸಿ ವಾತಾವರಣ ತಿಳಿಗೊಳಿಸಿದರು . ಸಂಜೆ ೫ಕ್ಕೆ ಮತದಾನ ಮುಕ್ತಾಯಗೊಳಿಸಿ " ಗೂಡಿನಿಂದ ಬಿಟ್ಟ ಮಂಗನಂತೆ " ಬದುಕಿದೆಯಾ ಬಡ ಜೀವವೇ ಎಂದು ಚುನಾವಣಾ ಸಾಮಾಗ್ರಿ ವಿತರಣಾ ಕೇಂದ್ರ ಕ್ಕೆ ಮರಳಿ ಎಲ್ಲವನ್ನು ಹಿಂದಿರುಗಿಸಿ ಸ್ವೀಕೃತಿ ರಶೀದಿ ಪಡೆದು ನಮ್ಮ ನಮ್ಮ ಮನೆ ಕಡೆ ತೆರಳಿದೆವು .
ಅನ್ನ ನೀರು ಸಿಗದ ಆ ತಾಣಕ್ಕೆ ಸಕಾಲದಲ್ಲಿ ನಮಗೆ ಮತದಾನದ ದಿನ ಊಟವನ್ನು ಸಪತ್ನೀಕರಾಗಿ ಬಂದು ಒದಗಿಸಿದ ಚೆಮ್ಬಾರ್ಪು ಮುರಳಿ ಮನೋಹರ (ಮುರಳಿ ಭಾವ) ರ ಉಪಕಾರವನ್ನು ಮರೆಯಲು ಸಾಧ್ಯವೇ ಇಲ್ಲ . ಮೇಲೆ ವರ್ಣಿಸಿದ ಸ್ಥಳಕ್ಕೆ ಅವರು ತಲುಪಿದ ; ಅಲ್ಲಿನ ಪ್ರತ್ಯಕ್ಷ ಅನುಭವ ಅವರ ಮಾತಲ್ಲೇ ಕೇಳುವುದು ಸೂಕ್ತ !

ಇದು ನನ್ನ ೩ ನೆ ಚುನಾವಣಾ ಕರ್ತವ್ಯ . ಮೂರು ಬಾರಿಯೂ ವಿವಿಧ ಅನುಭವ ನೀಡಿದ ಚುನಾವಣಾ ಆಯೋಗಕ್ಕೆ ನಾನು ಅಭಾರಿ.

4 comments:

ಬಾನಾಡಿ said...

ಪ್ರಜಾಪ್ರಭುತ್ವದ ನಿಜವಾದ ಕಂಬಗಳು ನಿಮ್ಮಂತ ಮತಗಟ್ಟೆ ಅಧಿಕಾರಿಗಳು. ನಿಮ್ಮ ಜೀವವನ್ನು ಪಣವಾಗಿಟ್ಟು ರಾತ್ರಿ ಹಗಲು ಇರ್ತೀರಲ್ಲ. ದೇವರು ಕಾಯಲಿ ನಿಮ್ಮನ್ನು. May god bless your kind of people.
ಒಲವಿನಿಂದ
ಬಾನಾಡಿ

YAKSHA CHINTANA said...

ಬೆಂಗಳೂರಿನ ಬಹುತೇಕ ಶಾಲೆಗಳು ಹೀಗೆ ಇರುವುದು.ನಾನು ಮತ ಹಾಕಿದ 129 ನಂಬರಿನ ಮತ ಗಟ್ಟೆ ಯಲ್ಲಿ ಮತ ಯಂತ್ರ ಕತ್ತಲೆಯಲ್ಲಿತ್ತು. ದೃಷ್ಟಿ ಶಕ್ತಿ ಕಡಿಮೆ ಇದ್ದವರು ಖಂಡಿತ ಸರಿಯಾಗಿ ಮತ ಹಾಕಲಿಲ್ಲ. ನೀವು ಹೇಳಿದ ಪುಲಕೇಶಿ ನಗರ ನಾನು ಚೆನ್ನಾಗಿ ಬಲ್ಲೆ. ಪರಿಸರದ ಬಗ್ಗೆ ಚೆನ್ನಾಗಿ ಸಹಜವಾಗಿ ಹೇಳಿದ್ದಿರಿ. ಮುಂಜಾನೆ ಹೋದರೂ ಅಲ್ಲಿಯ ರಸ್ತೆಗಳು ರಕ್ತ ಮಾಂಸ ಚೆಲ್ಲಾಡಿ ಬಹುಶ ಯುದ್ದರಂಗ ಎಂದರೆ ಹೀಗೆಯೇ ಇರುತ್ತದೋ ಏನೋ ಅಂತ ಅನಿಸಿಬಿದ್ತದೆ.

RJois said...

Ya its very tough job to do.. I was listening to such stories from my father who went also for election duty when was working as teacher.. U people are doing really a good job..

Shrikara K said...

Good one Bhatre...
Expecting more and more blogs from you