Friday, June 6, 2008

ಮರೆಯಾಗುತ್ತಿರುವ ಪೂರ್ವರಂಗ ...

ಮೊನ್ನೆ ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ಜಾಂಬವತಿ ಕಲ್ಯಾಣ ಪ್ರಸಂಗದ ಆರಂಭಕ್ಕೆ ಪರಂಪರೆಯ ಕೃಷ್ಣನ ಒಡ್ಡೋಲಗವನ್ನು ಹೊಳ್ಳರು ನಡೆಸಿಕೊಟ್ಟಾಗ ಸಂಭ್ರಮದಿಂದ ನೋಡಿದವರಲ್ಲಿ ನಾನೂ ಒಬ್ಬ .
ಯಾಕೆ ಇತ್ತೀಚೆಗೆ ಇಂಥ ಉತ್ತಮ ಸಂಪ್ರದಾಯಗಳು ಯಕ್ಷಗಾನದಿಂದ ಮರೆಯಾಗುತ್ತಿವೆ? ತಲೆ ಕೆರೆದುಕೊಂಡು ಬಲಿಪಜ್ಜರಿಗೆ ಪೋನಾಯಿಸಿದಾಗ ಅವರು ಹೇಳಿದ್ದು ಕೇಳಿ ನಿಜಕ್ಕೂ ನಾವೆಂಥಾ ವೈಭವವನ್ನು ಕಳೆದು ಕೊಳ್ಳುತ್ತ ಬರುತ್ತಿದ್ದೇವೆ ಎಂಬುದು ಅರ್ಥವಾಯಿತು.
ಯಕ್ಹಗಾನದಲ್ಲಿ ಪೂರ್ವರಂಗವೆಂಬುದು ಮೂಲ ಪಾಠ . ಅದನ್ನು ಚೆನ್ನಾಗಿ ಬಲ್ಲವನಿಗೆ ಯಾವುದೇ ಪ್ರಸಂಗವನ್ನೂ ನಿರರ್ಗಳವಾಗಿ ಆಡಿ ತೋರಿಸುವ ಸಾಮರ್ಥ್ಯ ಬರುತ್ತದೆ . ಸ್ತುತಿ ಪದ್ಯಗಳು , ಕೋಡಂಗಿ, ಬಾಲಗೊಪಾಲ ,ಷಣ್ಮುಖಸುಬ್ರಾಯ , ಅರ್ಧ ನಾರಿ, ಮುಖ್ಯ ಸ್ತ್ರೀವೇಶ, ಹಾಸ್ಯ , ಬಣ್ಣದ ವೇಷ , ರಾಮನ ಒಡ್ಡೋಲಗ , ಕೃಷ್ಣನ ಒಡ್ಡೋಲಗ , ಪಾಂಡವರ ಒಡ್ಡೋಲಗ, ಹೊಗಳಿಕೆ ಪ್ರಸಂಗ ಪೀಠಿಕೆ , ಮಂಗಳ ಪದಗಳು , ಸಭಾಲಕ್ಷಣ ಮುಂತಾದ ಎಲ್ಲ ವಿಚಾರಗಳ ಬಗ್ಗೆ ಪೂರ್ಣ ಮಾಹಿತಿ ಇದೆ .
ಬರ ಬರುತ್ತಾ ಸಮಯಾಭಾವವೋ,ಅವುಗಳನ್ನು ಕಲಿಯುವುದು ಯಾಕೆ ಎಂಬ ತಿರಸ್ಕಾರವೋ , ಅಂತೂ ಈಗ ನಾವು ನೋಡುವ ಪೂರ್ವ ರಂಗವು ನಿಜವಾಗಿ ಇರುವ ಪೂರ್ವ ರಂಗದ ಶೇ .೧೦ ಮಾತ್ರ .
ಇನ್ನು ಕಾಲ ಮಿತಿ ಆಡುವ ಮೇಳಗಳು ಪೂರ್ವರಂಗವನ್ನು ಪೂರ್ಣ ಕಡೆಗಣಿಸಿವೆ ಎಂದರೂ ತಪ್ಪಲ್ಲ . ಕೆಲವೊಮ್ಮೆ ಪ್ರಸಿದ್ದ ಭಾಗವರತರೂ ಸಣ್ಣ ಸಣ್ಣ ವಿಚಾರಗಳನ್ನ ತಪ್ಪು ಮಾಡುವಾಗ ನೋಡುಗರಿಗೆ ಕಿರಿ ಕಿರಿಯಾಗುತ್ತದೆ.
ಪೂರ್ವರಂಗದ ಬಗ್ಗೆ ಹಲವು ಕಮ್ಮಟಗಳೂ, ವಿಚಾರ ಸಂಕಿರಣಗಳೂ ನಡೆದರೂ ಏನೂ ಪ್ರಯೋಜನ ಮಾತ್ರ ಆಗಲಿಲ್ಲ .
ತೆಂಕು ತಿಟ್ಟು ಹಿತರಕ್ಷಣಾ ವೇದಿಕೆ ಸುಳ್ಯ ದವರು ಬಿಡುಗಡೆ ಮಾಡಿದ ಪೂರ್ವ ರಂಗ ದ್ವನಿ ಸುರುಳಿಯಲ್ಲಿ ಪೂರ್ವ ರಂಗದ ಹಲವು ಅಪರೂಪದ ಪದಗಳು ಕೇಳಬಹುದು.
ಸದ್ಯ ತೆಂಕು ತಿಟ್ಟಿನಲ್ಲಿ ಪೂರ್ವರಂಗದ ಕ್ರಮಗಳು ಸರಿಯಾಗಿ ಗೊತ್ತಿರುವ ಏಕೈಕ ಭಾಗವತರೆಂದರೆ ಬಲಿಪ ನಾರಾಯಣ ಭಾಗವತರು ಮಾತ್ರ . ಉಳಿದವರೆಲ್ಲ ಅಲ್ಪ ಸ್ವಲ್ಪ ಸಮಯ ಸಿಕ್ಕಾಗ ಅವರಲ್ಲಿ ಹೋಗಿ ಕಲಿತರೆ ಕಲಾಭಿಮಾನಿಗಳಿಗೆ ಅದನ್ನು ಆಸ್ವಾದಿಸುವ ಅವಕಾಶ ಸಿಗಬಹುದೇನೋ?
ಏನಿದ್ದರೂ ನಾವು ಸಮೃಧ್ಧ ಪರಂಪರೆಯ ವಿಶಿಷ್ಟ ಭಾಗವನ್ನು ಕಳೆದು ಕೊಳ್ಳುತ್ತಿರುವುದಂತೂ ಸತ್ಯ .
ಇದನ್ನು ಉಳಿಸುವಲ್ಲಿ ಏನು ಮಾಡಬಹುದು ? ನಿಮಗೇನನಿಸುತ್ತದೆ ?

3 comments:

venu gopal said...

ನಿಮ್ಮ ಅಭಿಪ್ರಾಯ ೧೦೦ ಪ್ರತಿಶತ ಸರಿ.

La..Na.. said...

havyasi kalavidaru poorvarangavannu kaliyabeku aga matra ee vishishta yakshaganada anga mareyaguvudannu tappisabahudu.......

hinde aneka idda poorvarangada veshagalu eega mareyagive udaharange : ardhanareeshwara, shanmukha subraya ityadi...

munde eega iruvantaha kodngi, kattuvesha, streevesha, hogalike vesha, kase streevesha ivugalalli ondondu mareyagutta hogi konege poorvaranga nashisuttade... addarinda navu ee nittinalli jagrutaragabeku endu nanna anisike

La..Na.. said...

ಹವ್ಯಾಸಿ ಕಲಾವಿದರು ಪೂರ್ವರಂಗವನ್ನು ಕಲಿಯಬೇಕು ಆಗ ಮಾತ್ರ ಈ ವಿಶಿಷ್ಟ ಯಕ್ಷಗಾನದ ಅಂಗ ಮರೆಯಾಗುವುದನ್ನು ತಪ್ಪಿಸಬಹುದು.......

ಹಿಂದೆ ಇದ್ದ ಪೂರ್ವರಂಗದ ಅನೇಕ ವೇಷಗಳುಈಗ ಮರೆಯಾಗಿವೆ ಉದಾಹರಣೆಗೆ : ಅರ್ಧನಾರೀಶ್ವರ, ಷಣ್ಮುಖ ಸುಬ್ರಾಯ ಇತ್ಯಾದಿ...

ಮುಂದೆ, ಈಗ ಇರುವಂತಹ ಕೋಡಂಗಿ, ಕಟ್ಟುವೇಷ, ಸ್ತ್ರೀವೇಷ, ಹೊಗಳಿಕೆ ವೇಷ, ಕಸೆ ಸ್ತ್ರೀವೇಷ ಇವುಗಳಲ್ಲಿ ಒಂದೊಂದು ಮರೆಯಾಗುತ್ತಾ ಹೋಗಿ ಕೊನೆಗೆ ಪೂರ್ವರಂಗ ನಶಿಸುತ್ತದೆ... ಆದ್ದರಿಂದ ನಾವು ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದು ನನ್ನ ಅನಿಸಿಕೆ